Posted by : A Sunday, December 29, 2024

ಇವತ್ತು ವಿಶ್ವಮಾನವ ದಿನಾಚರಣೆ ಅಂಥ ಫ್ರೆಂಡ್ಸ್ ವಾಟ್ಸಾಪ್ ಸ್ಟೇಟಸ್ ನೋಡಿದಾಗ ಅರಿವಾಗಿದ್ದು. 

ವಿಶ್ವಮಾನವ ಅಂದ್ರೆ ಏನು ಅಂತ ಅರಿಯುವ ತವಕ ಬಂತು. 

ಕುವೆಂಪು ಹಾಗು ಯಾವುದೇ ಕವಿಗಳ ಸಂದೇಶಗಳು ಹಾಗು ಸಾಹಿತ್ಯಗಳು ಆಯಾ ಕಾಲಕ್ಕೆ ಜನಕ್ಕೆ ಸಮಯಕ್ಕೆ ಸೂಕ್ತವಾದ ಅವರವರ ಅನುಭವಗಳ ಸಂದೇಶಗಳು ಅಪಾರ ಹಾಗು ಅನನ್ಯ, ಹಾಗಂತ ಎಲ್ಲಾ ಸಾಹಿತಿಗಳ ಹಾಗು ಬರಹಗಾರರು ಹೇಳಿದ ಪ್ರತಿ ವಾಕ್ಯವು ಎಲ್ಲರಿಗೂ ಎಲ್ಲಾ ಕಾಲಕ್ಕೂ ಸರಿ ಹೊಡುವಂತ್ತದ್ದು ಎಂದು, ಒಪ್ಪಿಕೊಳೋದು ಎಂದು ಅವರವರ ಅನುಭವ ಭಾವ ಹಾಗು ಅದರ ಅಭಿರುಚಿ ಗೆ ಬಿಟ್ಟದ್ದು.

 ತಮ್ಮ ತಮ್ಮ ಅನುಭವ ಹಾಗು ಅಭಿರುಚಿಗೆ ಅದಕ್ಕೆ ತಕ್ಕಂತೆ ಎಲ್ಲಾ ಸಾಹಿತ್ಯಕ್ಕೆ ಪ್ರತಿಯೊಬ್ಬರ ಸಂಪರ್ಕ ಹಾಗು ಬಂಧ ಬೆಳೆದಿರುತ್ತೆ(ಕೆಲವರು ಎಸ್ ಎಲ್ ಬೈರಪ್ಪ ಸಾಹಿತ್ಯ ಒಪ್ಪಲ್ಲ, ಮತ್ತೆ ಸಿದ್ಧಲಿಂಗಯ್ಯ, ಬರಗೂರು ರಾಮಂದ್ರಪ್ಪನವರ, ಕೆಪಿಪಿಸಿಟಿ etc. ಸಾಹಿತ್ಯವನ್ನು ಎಲ್ಲಾ ಸಾಹಿತ್ಯಾಸಕ್ತರು ಎಲ್ಲಾರೂ ಒಪ್ಪಿಕೊಂಡಿದ್ದಾರೆ ಎಂದರೆ ತಪ್ಪಾದೀತು. ಒಬ್ಬ ಕವಿ ಅವನ ಅನುಭವವನ್ನು  ಕಾಲ್ಪನಿಕ, ಸಾಮಾಜಿಕ, ಭೌತಿಕ, ಚೌಕಟ್ಟನು ಮೀರಿ ಕಟ್ಟಿಕೊಡಲು ಪ್ರಯತ್ನಿಸುತ್ತಾನೆ. ಇಷ್ಟೆಲ್ಲಾ ಪೀಠಿಕೆ ಏನಕ್ಕೆ ಅಂದ್ರೆ ಇವತ್ತಿನ ವಿಶ್ವಮಾನವ ದಿನಾಚರಣೆ ಅಂಥ ಒಂದು ದಿನ  ಎಷ್ಟೋ ಜನಕ್ಕೆ ರಿಜಿಸ್ಟರ್ ಆಗಿಯೇ ಇರೋದಿಲ್ಲ, ನನಗೂ ದಿನ ನೆನಪಿಲ್ಲ, ಉದಾಹರಣೆಗೆ ವರನಟ ರಾಜಕುಮಾರ್ ಜನ್ಮ ದಿನ (My favorite actor), ಸಚಿನ್ ತೆಂಡೂಲ್ಕರ್ ಜನ್ಮ ದಿನ (God of cricket), ರಾಜಕೀಯ ಪ್ರೇರಿತ ಮಕ್ಕಳ ದಿನಾಚರಣೆ,  ಗಾಂಧಿ ದಿನಾಚರಣೆ (ರಜದ ಮಜಾ), ಹೀಗೆಲ್ಲ ಎಷ್ಟೋ ದಿನಗಳು ನಮ್ಮ ಬದುಕಲ್ಲಿ ಹಾಸು ಕೊಕ್ಕಿರುತ್ತೆ. 

ಆದರೆ ಯಾಕೆ ವಿಶ್ವಮಾನವ ದಿನಾಚರಣೆ ಅನ್ನೊ ದಿನ, ಯಾರದೋ ಫ್ರೆಂಡ್ಸ್ ಸ್ಟೇಟಸ್ ನೋಡಿದ ಮೇಲೆ ನಮಗೆ ಅರಿವಿಗೆ ಬರುತ್ತೆ ಅಂದ್ರೆ, we many are not registered with the message of the day, ನನ್ನ ಪ್ರಕಾರ  ವಿಶ್ವಮಾನವ ದಿನಾಚರಣೆ ಸಂದೇಶ ಏನಂದ್ರೆ, ""ಸಾರ್ವತ್ರಿಕ ಸರ್ವ ಸಮ್ಮತ ಮನುಷ್ಯ ಪ್ರಜ್ಞೆಯನ್ನು ಹೊಂದಿರುವ ಮಾನವ,  ತನ್ನೊಳಗಿನ ಸಣ್ಣ ಸಣ್ಣ ಇತರ ಆಯಾಮಗಳ ಪರಿಗಣನೆಗಳಿಂದ ಸೀಮಿತವಾಗಿಲ್ಲದ ಮಾನವ, ಎಲ್ಲರನ್ನೂ ಎಲ್ಲದನ್ನೂ ಸಮನಾಗಿ ಸಮಚಿತ್ತದ  ದಿಂದ ಕಾಣುವ ಮಾನವ, ತನ್ನ ಕುರುಹುಗಳನ್ನು ಇತರಲ್ಲಿ ಕಾಣ ಬಯಸದ ಮಾನವ😊 ಅವನೇ ನಿಜವಾದ ವಿಶ್ವಮಾನವ. ಅಂಥಹ ಮಾನವರ ವಿಶ್ವವನ್ನು ಕಟ್ಟೋಣ ಅನ್ನೋದೇ"",,,

 ನಮ್ಮ ಅಭಿಪ್ರಾಯದ ವಿಶ್ವಮಾನವ ದಿನಾಚರಣೆ🙏

ಮೇಲಿನ ಹಾಗೆ ನಾವು ಬದುಕಿರೋದಿಕ್ಕೆ ಸಾಧ್ಯತೆ ಕಮ್ಮಿ, ಮೇಲಿನ ಸಂದೇಶ ಕವಿಯ ಬರವಣಿಗೆಯಲ್ಲಿ ಹಾಗು ಪಠ್ಯದ ಮದ್ಯದಲ್ಲಿ ಇರೋ ಅಂಕಗಳನ್ನು ಕೊಡೋ ಒಂದು ಚಾಪ್ಟರ್ ಹೊರತು, ಅದು ನಮಗೆ ಅಳವಡಿಸಿಕೊಳ್ಳಲು, ಮೈಂಡ್ ಗೆ ರಿಜಿಸ್ಟರ್ ಮಾಡಿಕೊಳಲ್ಲೂ ನಿಲುಕದ, ಹಾಗು ಮೀರಿದ ಒಂದು ಸಂದೇಶ ಅಂಥ ಅನ್ನಿಸಿ ವಾಟ್ಸಾಪ್ ಸ್ಟೇಟಸ್ ಹಾಕಿ ಮರೆಯೋದೆ ಹೆಚ್ಚು.

ಏನೇ ಇರಲಿ, ಸಂದೇಶ ಕವಿಯ ಅನುಭವದಲ್ಲಿ ಬಂದಿದ್ದು ಹಾಗು ಈಗಲೂ ಸಲ್ಲುವ ಒಂದು ಉತ್ತಮ ಸಂದೇಶ ವನ್ನು ತಲೆಗೆ ರಿಜಿಸ್ಟರ್ ಮಾಡಿಕೊಳ್ಳುವ, ಯಾವುದೇ ಸ್ಟೇಟಸ್ ನೋಡದೆ ಮನದೊಳಗೆ ಅರಿತು ಮೆರೆಸುವ, ಅಳವಡಿಸಿಕೊಳ್ಳುವ ದಿನಗಳತ್ತ ಸಾಗುವ ಎಂದು ಬಯಸುತ್ತಾ.....

ಅನೀ

Leave a Reply

Subscribe to Posts | Subscribe to Comments

- Copyright © Anil Kumar JR - Skyblue - Powered by Blogger - Designed by Johanes Djogan -