- Back to Home »
- ಪ್ರೀತಿಯ ಜ್ವಾಲೆಯಲಿ ಬೆಂದು ಮಿಂದು ಕರಗಿ ಹೋಗುವ ಬಯಕೆಯಲಿ....,
Posted by : A
Saturday, December 27, 2025
ಅಲೆಗಳಿಲ್ಲದ ಸಮುದ್ರದಲ್ಲೂ ಹೃದಯಗಳ ತುಡಿತದ ಹೊಡೆತ,
ಒಂದೇ ದಾರಿಯಲಿ ಬೇರೆ ಬೇರೆ ದಿಕ್ಕಿನ ಗಮನ .
ಒಂದು ಭವಿಷ್ಯದ ಜೀವನದ ದಾರಿಯ ಹುಡುಕುತ್ತಿರೆ, ,
ಮತ್ತೊಂದು ಅದರ ಕಣ್ಣಲ್ಲೇ ಅದರ ಭವಿಷ್ಯವನ್ನು ಹುಡುಕುತ್ತಿಹೇ.
ಗಾಳಿಯೇ ಇಲ್ಲದ ಪ್ರಯಾಣದಲ್ಲಿ ದಿಕ್ಕು ತಪ್ಪಿದ್ದು ಪ್ರೀತಿ ಅಲ್ಲ ಸಮಯ.
ನೆನಪಿನ ಥೇರಲಿ ತೇಲುತ ಸಾಗಿದ ಪಯಣವ ಪಯಣಿಸುವ ಮನಗಳ ಸದಾ ತೆರೆದಿಟ್ಟ ಪ್ರೀತಿಯಲಿ, ಒಬ್ಬರನ್ನೊಬ್ಬರು ತಲುಪಲಾಗದೇ, ಒಂದು ತೆರೆದಿಡದ ಪ್ರೀತಿಯ ಲೀನವಾಗಿಕೆಗೆ ಸಾದಾ ಕಾಯುತ್ತಾ..ಹವಣಿಸುತ್ತಾ, ಅದರ ಪ್ರೀತಿಯ ಜ್ವಾಲೆಯಲಿ ಬೆಂದು ಮಿಂದು ಕರಗಿ ಹೋಗುವ ಅದೇ ಬಯಕೆಯಲಿ ಅರಸುತ್ತಾ....,
ಅನೀ