Posted by : A Saturday, December 27, 2025

ಯಾರಾದರೂ ನಿಜವಾಗಿಯೂ ನಿಮ್ಮ ಜೀವನದಲ್ಲಿ, ಪ್ರೀತಿಯಲ್ಲಿ, ಸ್ನೇಹದಲ್ಲಿ  ಇರಲು ಬಯಸಿದರೆ,

ಅದರ ನಿಜವಾದ ಭಾವನೆಯ ಅರಿವನ್ನು ನೀವು ಖಂಡಿತ ಅನುಭವಿಸುತ್ತೀರಿ.
ಅವರ ನಿರಂತರತೆಯಲ್ಲಿ.
ಅವರ ಸಂವಹನದಲ್ಲಿ.
ಒತ್ತಾಯಿಸದೇ ಅವರು ತಾವೇ ನಿಮ್ಮ ಜೀವನದಲ್ಲಿ ಕಾಣಿಸಿಕೊಳ್ಳುವ ರೀತಿಯಲ್ಲಿ. 
ಒಂದೊಮ್ಮೆ ನಿಮ್ಮ ಬಂಧಗಳ ಗಟ್ಟಿಗಾಗಿ ಬೆಸೆಯಲು ಮಾಡುವ
ಪ್ರಯತ್ನಕ್ಕಾಗಿ ನೀವು ಸದಾ ಬೇಡಿಕೊಳ್ಳಬೇಕಾದರೆ,
ಈ ಬಂಧಗಳ ಲ್ಲಿ ನಿಮ್ಮ  ಮೌಲ್ಯವನ್ನು ಪದೇ ಪದೇ ವಿವರಿಸಬೇಕಾದರೆ,
ಅಥವಾ ನಿಮ್ಮ ಪ್ರೀತಿಪಾತ್ರರ ಜೀವನದಲ್ಲಿ ನಿಮ್ಮ ಸ್ಥಾನಕ್ಕಾಗಿ ನೀವು ಹೋರಾಡಬೇಕಾದರೆ —
ಅದು ಸಂಬಂಧವಲ್ಲ,
ಅದು ಭಾವನಾತ್ಮಕ ದಣಿವು.

ಸಂಬಂಧಗಳನ್ನು ಬಲವಂತವಾಗಿ ಉಳಿಸಲು ಪ್ರಯತ್ನಿಸಿದಾಗ ಅದು ಜನರ ಮೇಲೆ ಏನು ಮಾಡುತ್ತದೆ ಎಂಬುದನ್ನು ನಾನು ಕಂಡಿದ್ದೇನೆ:

ಅದು ಆತ್ಮಗೌರವವನ್ನು ಕುಗ್ಗಿಸುತ್ತದೆ,
ಆತಂಕವನ್ನು ಹುಟ್ಟಿಸುತ್ತದೆ,
ಮತ್ತು ನೀವು “ತುಂಬಾ ಕೇಳುತ್ತಿದ್ದೇನೆ” ಎಂದು ನಂಬುವಂತೆ ಮಾಡುತ್ತದೆ,
ಆದರೆ ನೀವು ಕೇಳುತ್ತಿರುವುದು ಕೇವಲ ಕೆಲವೇ ಚಿಕ್ಕದನ್ನು:
ಗೌರವ, ಸ್ಪಷ್ಟತೆ, ಪ್ರಾಮಾಣಿಕತೆ ಮತ್ತು ಪ್ರಯತ್ನ.

ಇದೋ ನೋಡಿ ಸತ್ಯ:
ನಿಜವಾಗಿಯೂ ನಿಮ್ಮ ಸಂಭದ ದ ಬಗ್ಗೆ, ಪ್ರೀತಿ,ಸ್ನೇಹದಲ್ಲಿ ಕಾಳಜಿ ವಹಿಸುವವರಿಗೆ ನಿಮ್ಮ ಮೌಲ್ಯಗಳ
ನೆನಪಿಸುವ ಅಗತ್ಯವಿಲ್ಲ.
ಅವರು ತಮ್ಮ ಜೀವನದಲ್ಲಿ ನಿಮಗಾಗಿ ಸದಾ ಸಮಯ ಜಾಗ ಮಾಡುತ್ತಾರೆ. ಎಂಥದೇ 
ಕಷ್ಟದ ದಿನಗಳಲ್ಲೂ ನಿಮ್ಮನ್ನೇ ಮೊದಲ ಆಯ್ಕೆ ಮಾಡುತ್ತಾರೆ, ಭಾವನಾತ್ಮಕವಾಗಿ ಅಥವಾ ದೈಹಿಕ ಬೆಂಬಲಕ್ಕಾಗಿ. ಸಂತೋಷದ ಸಮಯದಲ್ಲಿ ನೀವೇ ಅವರ ಮೊದಲ ನೆನಪು.

ನೀವು ನಿಮ್ಮ ಹೃದಯದ ಅತ್ಯುತ್ತಮ ಭಾವಗಳ ಭಾಗಗಳಾಗಿ ಸ್ಥಾನ ಕೊಟ್ಟಾಗ,   
ಅವರು ನಿಮ್ಮನ್ನು ಕೇವಲ ಹತ್ತಾರು ಇರುವ ಆಯ್ಕೆಯಂತೆ  ವರ್ತಿಸುವುದಿಲ್ಲ.
ಇದೆಲ್ಲ ಅರಿತಿದ್ದೂ , ಅಂತಹ ಪ್ರೀತಿ, ಸ್ನೇಹ, ಸಂಬಂಧ,  ಅವರನ್ನೇ ಬಿಟ್ಟು ಬಿಡುವುದು ನಮ್ಮ
ವಿಫಲತೆಯಲ್ಲ.
ಅದು ಒಂದು  ಭಾವನಾತ್ಮಕ ಪ್ರೌಢಿಮೆ.
ಅದು ನಿಮ್ಮ ಶಾಂತಿಯನ್ನು ಆಯ್ಕೆ ಮಾಡುವ ವಿಧಾನ.

ಮೌಲ್ಯೀಕರಿಸದ ಸ್ಥಳದಲ್ಲಿ ಬದುಕುವುದಕ್ಕಿಂತ
ನಿಮ್ಮನ್ನು ನೀವು ಮುಕ್ತಗೊಳಿಸುವ ಒಂದು ಉತ್ತಮ ನಿರ್ಧಾರ.
ಜನರನ್ನು ಉಳಿಯಲು ಬಲವಂತ ಮಾಡಬೇಡಿ.


ನಿಮ್ಮ ಮೌಲ್ಯವನ್ನು ಕಾರಣವಿಲ್ಲದೇ ಗುರುತಿಸುವವರಿಗೆ
ನಿಮ್ಮ ಜೀವನದಲ್ಲಿ ಸದಾ ಜಾಗ ಇರುತ್ತದೆ.
ಮತ್ತು ಕೆಲವೊಮ್ಮೆ,
ನೀವು ಒಮ್ಮೆ ತೆರೆದಿಟ್ಟಿದ್ದ ಬಾಗಿಲನ್ನು ಮುಚ್ಚುವುದು ಅದು ನಿಮಗೆ ನೀವು ಕೊಡುವ 
ಅತ್ಯುತ್ತಮ ಆತ್ಮಗೌರವವಾಗಿರುತ್ತದೆ.

ಅನೀ

Leave a Reply

Subscribe to Posts | Subscribe to Comments

- Copyright © Anil Kumar JR - Skyblue - Powered by Blogger - Designed by Johanes Djogan -